ಅಭಿಪ್ರಾಯ / ಸಲಹೆಗಳು

ಆಶಾದೀಪ ಯೋಜನೆ

ರಾಜ್ಯ ಸರ್ಕಾರವು ಖಾಸಗಿ ವಲಯದ ಕೈಗಾರಿಕೆಗಳು/ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಉದ್ಯೋಗವನ್ನು ಒದಗಿಸುವಂತೆ ಉದ್ಯೋಗದಾತರನ್ನು ಉತ್ತೇಜಿಸುವ ಸಲುವಾಗಿ 2017-18ನೇ ಸಾಲಿನ ಆಯವ್ಯಯದಲ್ಲಿ “ಆಶಾದೀಪ ಯೋಜನೆ”ಯನ್ನು ಘೋಷಿಸಲಾಗಿದೆ.

  • ಈ ಯೋಜನೆಯಡಿ ಪ್ರಪ್ರಥಮವಾಗಿ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದವರನ್ನು ಖಾಯಂ ಕೆಲಸಗಾರರಾಗಿ ನೇಮಿಸಿಕೊಳ್ಳುವ ಮಾಲೀಕರ ಪಾಲಿನ ಭವಿಷ್ಯ ನಿಧಿ ವಂತಿಕೆ ಹಾಗೂ ಕಾರ್ಮಿಕರ ರಾಜ್ಯ ವಿಮಾ (ಇ.ಎಸ್.ಐ) ವಂತಿಕೆಯನ್ನು ನೇಮಕ ಮಾಡಿದ ಮೊದಲ 2 (ಎರಡು) ವರ್ಷಗಳವರೆಗೆ ಹಾಗೂ ಗುತ್ತಿಗೆ ಕಾರ್ಮಿಕರಾಗಿ ನೇಮಿಸಿಕೊಂಡಲ್ಲಿ, 1 (ಒಂದು) ವರ್ಷದವರೆಗೆ ಮರು ಪಾವತಿಸುವ ಸೌಲಭ್ಯವನ್ನು ಒದಗಿಸಲಾಗುತ್ತದೆ.
  • 2017-18ನೇ ಸಾಲಿನಲ್ಲಿ ರೂ.40.00 ಕೋಟಿ ಹಾಗೂ 2018-19ನೇ ಸಾಲಿನಲ್ಲಿ ರೂ.3.24 ಕೋಟಿ ಮೊತ್ತ ಯೋಜನೆ ಅನುಷ್ಠಾನಕ್ಕಾಗಿ ಬಿಡುಗಡೆಯಾಗಿರುತ್ತದೆ. 2019-20ನೇ ಸಾಲಿನಲ್ಲಿ ರೂ.4.33 ಕೋಟಿ ಹಂಚಿಕೆಯಾಗಿರುತ್ತದೆ.
  • ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು 1960 ರ ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆಯಡಿ “ಕರ್ನಾಟಕ ಸ್ಟೇಟ್ ವರ್ಕರ್ಸ್ ವೆಲ್‍ಫೇರ್ ಅಂಡ್ ಸೋಷಿಯಲ್ ಸೆಕ್ಯೂರಿಟಿ (ಆಶಾದೀಪ ಯೋಜನೆ) ಸೊಸೈಟಿ”ಯನ್ನು ನೊಂದಾಯಿಸಲಾಗಿರುತ್ತದೆ.
  • ಕೇಂದ್ರ ಸರ್ಕಾರದ್ದೇ ಆದ ಇಂತಹುದೇ ಒಂದು ಯೋಜನೆ ಈಗಾಗಲೇ ಚಾಲ್ತಿಯಲ್ಲಿರುವುದರಿಂದ ರಾಜ್ಯದಲ್ಲಿ ಈ ಯೋಜನೆಯನ್ನು ಹೆಚ್ಚು ಆಕರ್ಷಣೀಯ ಹಾಗೂ ಜನಪ್ರಿಯಗೊಳಿಸಲು ಪ್ರಸ್ತುತ ಇರುವ ಯೋಜನೆಯ ರೂಪುರೇಷೆಗಳನ್ನು ಪರಿಷ್ಕರಿಸಲಾಗಿದೆ.
  • ಪರಿಷ್ಕøತ ಪ್ರಸ್ತಾವನೆಯಲ್ಲಿ ಅಪ್ರೆಂಟಿಸ್ ಕಾಯ್ದೆಯಡಿ ಅಪ್ರೆಂಟಿಸ್‍ಗಳಾಗಿ ನೇಮಕಗೊಂಡ ಟ್ರೈನೀಗಳಿಗೆ ನೀಡುವ ಪ್ರೋತ್ಸಾಹಧನವನ್ನು ನಿಗಧಿತ ಕಾಲಾವಧಿಗೆ ಉದ್ಯೋಗದಾತರಿಗೆ ಮರುಪಾವತಿಸುವುದು: ಈ ಯೋಜನೆಯಡಿ ಅಲ್ಪಾವಧಿ ಹಾಗೂ ಪೂರ್ಣಾವಧಿಗೆ (Short Term and Full Term Apprentice Trainees) ನಿಯೋಜಿಸಲಾಗುವ ಅಪ್ರೆಂಟಿಸ್ ಟ್ರೈನಿಗಳಿಗೆ ನೀಡುವ ಭತ್ಯೆಯ ಭಾಗÀಶಃ ಮೊತ್ತವನ್ನು ಉದ್ಯೋಗದಾತರಿಗೆ ಮರು ಪಾವತಿಸಲಾಗುತ್ತದೆ.
  • ಅಪ್ರೆಂಟಿಸ್ ಟ್ರೈನಿಂಗ್ ಮುಗಿದ ನಂತರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಖಾಯಂ ನೇಮಕಾತಿ ಮಾಡಿಕೊಂಡಲ್ಲಿ ಮಾಲಿಕರು ಅವರಿಗೆ ಪಾವತಿಸುವ ಭಾಗಶಃ ಮಾಸಿಕ ವೇತನವನ್ನು ಮರುಪಾವತಿಸುವುದು. ಪರಿಶಿಷ್ಟರಿಗೆ ಉದ್ಯೋಗ ಒದಗಿಸಲು ಖಾಸಗಿ ವಲಯದ ಮಾಲೀಕರಿಗೆ ಉತ್ತೇಜನ ನೀಡುವುದು.
  • ಯೋಜನೆಯ ಅನುಷ್ಠಾನದ ಪ್ರಕ್ರಿಯೆ ಪ್ರಾರಂಭಿಕ ಹಂತದಲ್ಲಿದ್ದು, ಎನ್‍ಐಸಿ ಸಹಕಾರದೊಂದಿಗೆ ಪ್ರತ್ಯೇಕ ಪೊರ್ಟಲ್ ಅಭಿವೃದ್ಧಿಪಡಿಸಲಾಗುತ್ತಿದೆ. ಬಹುವಿಸ್ತಾರವಾದ ಅರಿವು ಮೂಡಿಸುವ ಕಾರ್ಯಕ್ರಮಗಳು ಹಾಗೂ ಸಂಬಂಧಿಸಿದ ಭಾಗೀದಾರ ಇಲಾಖೆಗಳು ಹಾಗೂ ಇತರೆ ಸಂಸ್ಥೆಗಳೊಂದಿಗೆ ವಿಚಾರ ವಿನಿಮಯ ಮಾಡಿ ಸಕಾರಾತ್ಮಕವಾಗಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ: https://ashadeepa.in/

ಇತ್ತೀಚಿನ ನವೀಕರಣ​ : 13-03-2020 10:28 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾರ್ಮಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080