ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ನಮ್ಮ ಬಗ್ಗೆ

   ಕಾರ್ಮಿಕ ಇಲಾಖೆಯು ಸರ್ಕಾರದ ಇಲಾಖೆಗಳಲ್ಲಿ ಒಂದು ಪ್ರಮುಖ ಇಲಾಖೆಯಾಗಿದೆ. ಕಾರ್ಮಿಕ ಕಲ್ಯಾಣದ ಜೊತೆಗೆ ಸುಗಮ ಕೈಗಾರಿಕಾ ಬಾಂಧವ್ಯಗಳ ನಿರ್ವಹಣಾ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಕಾರ್ಮಿಕ ಕಾನೂನುಗಳ ಜಾರಿಗೊಳಿಸುವಿಕೆ ಮತ್ತು ಕೈಗಾರಿಕಾ ಶಾಂತಿಯನ್ನು ಉತ್ತೇಜಿಸುವ ಚಟುವಟಿಕೆಗಳು ಏಕ ಕಾಲದಲ್ಲಿ ಇಲಾಖೆಯ ಮೂಲಕ ನಡೆಸಲ್ಪಡುತ್ತವೆ. ಇದರಿಂದಾಗಿ ಕೈಗಾರಿಕಾ ಬೆಳವಣಿಗೆ ಮತ್ತು ಕಾರ್ಮಿಕ ಕಲ್ಯಾಣದ ಉದ್ದೇಶಗಳನ್ನು ಸಾಧಿಸಬಹುದಾಗಿದೆ.

ಮಾನ್ಯ ಕಾರ್ಮಿಕ ಸಚಿವರ ನಿಯಂತ್ರಣದಲ್ಲಿ ಈ ಇಲಾಖೆಯ 3 ಕ್ಷೇತ್ರ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಇವರ ನಿಯಂತ್ರಣ ಮತ್ತು ಸಮನ್ವಯಕ್ಕೆ ಒಳಪಟ್ಟಿರುತ್ತದೆ.

3 ಕ್ಷೇತ್ರ ಇಲಾಖೆಗಳು :-

 1. ಕಾರ್ಮಿಕ ಇಲಾಖೆ :- ವಿವಿಧ ಕಾರ್ಮಿಕ ಕಾನೂನುಗಳನ್ನು ಅನುಷ್ಟಾನಗೊಳಿಸುವ ಮೂಲಕ ಕಾರ್ಮಿಕರ ಮಜೂರಿ, ಕೆಲಸದ ಸ್ಥಿತಿಗತಿ ಮತ್ತು ಕೈಗಾರಿಕಾ ಬಾಂಧವ್ಯ ಹಾಗೂ ಕಲ್ಯಾಣ ಕ್ರಮಗಳನ್ನು ಜಾರಿಗೊಳಿಸುವುದು.

 2. ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ :- ಕಾರ್ಖಾನೆಗಳ ಕಾಯ್ದೆ 1948 ಹಾಗೂ ಬಾಯ್ಲರ್ಸ್ ಕಾಯ್ದೆ 1923 ಗಳನ್ನು ಜಾರಿಗೊಳಿಸುವ ಮೂಲಕ ಕೈಗಾರಿಕಾ ಸುರಕ್ಷತೆ, ಆರೋಗ್ಯ ಔದ್ಯೋಗಿಕ ಕಾಯಿಲೆಗಳು ಮತ್ತು ಕಾರ್ಖಾನೆಗಳ ಕಾರ್ಯಚಟುವಟಿಕೆಗಳನ್ನು ಅನುಷ್ಟಾನಗೊಳಿಸುವುದು.

3. ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈಧ್ಯಕೀಯ ಸೇವೆಗಳ ಇಲಾಖೆ :- ಇ.ಎಸ್.ಐ ಯೋಜನೆಯ ಸದಸ್ಯರಾಗಿರುವ ಕಾರ್ಮಿಕರಿಗೆ ಆಸ್ಪತ್ರೆಗಳ ಔಷಧಾಲಯಗಳ ಮೂಲಕ ಆರೋಗ್ಯ ತಪಾಸಣ ಔಷದೋಪಚಾರಗಳ ವಿತರಣೆ/ನಿಡುವುದು.

     ಮೇಲಿನ 3 ಇಲಾಖೆಗಳ ಮುಖ್ಯಸ್ಥರು ಸ್ವತಂತ್ರವಾಗಿ ತಮ್ಮ ಇಲಾಖೆಗಳ ಕೆಲಸವನ್ನು ನೋಡಿಕೊಳ್ಳತ್ತಿದ್ದು, ಸರ್ಕಾರದ ಕಾರ್ಯದರ್ಶಿ, ಕಾರ್ಮಿಕ ಸಚಿವಾಲಯ ಇವರ ಮೂಲಕ ನೇರವಾಗಿ ಕಾರ್ಮಿಕ ಸಚಿವರಿಗೆ ವರದಿ ಮಾಡುತ್ತಾರೆ.

ಇತ್ತೀಚಿನ ನವೀಕರಣ​ : 08-07-2019 03:44 PM ಅನುಮೋದಕರು: Bharmarajappa M K


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾರ್ಮಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080